ಕರ್ಮ : ಮುನ್ನುಡಿಯಿಂದ...
ಎಸ್ ಎಲ್ ಭೈರಪ್ಪನವರು ಅಂದು ಕರ್ಮದ ಪ್ರಥಮ ಪ್ರತಿ ಓದಿ ನನಗೆ ಖುದ್ದು ಕಾಲು ಹಾಯಿಸಿ ಮೆಚ್ಚುಗೆ ವ್ಯಕ್ತಪಡಿಸಿದಾಗ ಎಲ್ಲಿಲ್ಲದ ನೆಮ್ಮದಿ. ನಾಟಕಕಾರನಾದ ನಾನು ನಾಟಕದ ರಚನೆ, ನಿರ್ದೇಶನ, ನಟನೆಯಿಂದ ಒಂದೂವರೆ ವರ್ಷಗಳ ಕಾಲ ಈ ಕಾದಂಬರಿಗಾಗಿ ದೂರವಾದೆ. ಪ್ರಸ್ತುತ ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ ಎಂದು ಒಬ್ಬರು ಹಲುಬಿದ್ದನ್ನು ಕಂಡು ಕಾದಂಬರಿಯಲ್ಲಿ ತೊಡಗಲು ಮನಸಾಯಿತು. ಅದು ದುಸ್ಸಾಹಸವೋ, ಕಾಲಹರಣವೋ ಓದುಗರು ತಿಳಿ ಹೇಳಿ. ತಂದೆಯ ಸಾವಿನ ನಂತರದಲ್ಲಿ ಪ್ರಸ್ತುತ ನಗರ ಸಮಾಜದ ವ್ಯಕ್ತಿ ಹದಿನೈದು ದಿನಗಳ ಸಮಯದಲ್ಲಿ ಹಲವಾರು ಹೊಳಹುಗಳನ್ನು ಕಂಡು ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕುತ್ತಾನೆ. ಹೊಳಹುಗಳಿಂದ ಪ್ರಾರಂಭವಾಗಿ ಕೊನೆಯವರೆಗೆ ಆತನ್ನಲ್ಲಿ ಆಗುವ ಸ್ಥಿತ್ಯಾಂತರದ ಯಾನವೇ ಕರ್ಮ.
ಕರ್ಮದ ಬರವಣಿಗೆಯ ಆರಂಭದಲ್ಲಿ ನನ್ನಲ್ಲಿದ್ದ ಹಲವಾರು ತಾತ್ವಿಕ ಗೊಂದಲಕ್ಕೆ ಎಸ್ ಎಲ್ ಭೈರಪ್ಪನವರು ಸೂಕ್ತ ವಿಚಾರಗಳೊಂದಿಗೆ ನೆಲೆಗಟ್ಟನ್ನು ಒದಗಿಸಿದರು, ನಾಗರಾಜ ಶ್ರೌತಿಗಳು ಹದಿನೈದು ದಿನಗಳವರೆಗಿನ ಕಾರ್ಯದ ಪೂರ್ಣ ಪಾಠ ಹೆಳೀಕೂಟ್ಟರು.ಶತಾವಧಾನಿ ಅರ್ ಗಣೇಶರು ಕಾದಂಬರಿಯಲ್ಲಿನ ಸಂಸ್ಕ್ರ್ತತ ಭಾಗಗಳನ್ನು ತಿದ್ದಿಕೊಟ್ಟರು. ಇವರೆಲ್ಲರಿಗೂ ನನ್ನ ಸಾಷ್ಟಾಂಗ ಧನ್ಯವಾದ.