About Me
Popular Posts
-
ಡಾಡಾ ಡಾ ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹತ್ತಿರವಿರುವ ಈಸೂರುಗ್ರಾಮದಲ್ಲಿ ಫೆಬ್ರುವರಿ ೭ , ೧೯೨೬ ರಂದು ಜನಿಸಿದರು. ತಂದೆ ಶಾಂತವೀ...
-
ಕರ್ಮ : ಮುನ್ನುಡಿಯಿಂದ... ಎಸ್ ಎಲ್ ಭೈರಪ್ಪನವರು ಅಂದು ಕರ್ಮದ ಪ್ರಥಮ ಪ್ರತಿ ಓದಿ ನನಗೆ ಖುದ್ದು ಕಾಲು ಹಾಯಿಸಿ ಮೆಚ್ಚುಗೆ ವ್ಯಕ್ತಪಡಿಸಿದಾಗ ಎಲ್ಲಿಲ್ಲದ ನ...
-
ಕುವೆಂಪು - ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧ , ೧೯೯೪ ) - ಕನ್ನಡವು ಪಡೆದ ಅತ್ಯುತ್ತಮ ಕವಿ, ಎರಡನೆ ರಾಷ್ಟ್ರಕವಿ . ಜ್ಞಾನಪೀಠ ...
ಕುವೆಂಪು
Labels:
ವ್ಯಕ್ತಿ
ಕುವೆಂಪು - ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, ಎರಡನೆ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದಪ್ರ ಪ್ರಥಮ ವ್ಯಕ್ತಿ. 'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ಮೊದಲ ಕಾವ್ಯನಾಮ-"ಕಿಶೋರ ಚಂದ್ರವಾಣಿ" -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯತೊಡಗಿದರು. ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
ಲೇಖನ ಬರೆದವರು » ನಾಗೇಶ್ at 12:17 pm
ಕರ್ಮ
Labels:
ಪುಸ್ತಕ
ಕರ್ಮ : ಮುನ್ನುಡಿಯಿಂದ...
ಎಸ್ ಎಲ್ ಭೈರಪ್ಪನವರು ಅಂದು ಕರ್ಮದ ಪ್ರಥಮ ಪ್ರತಿ ಓದಿ ನನಗೆ ಖುದ್ದು ಕಾಲು ಹಾಯಿಸಿ ಮೆಚ್ಚುಗೆ ವ್ಯಕ್ತಪಡಿಸಿದಾಗ ಎಲ್ಲಿಲ್ಲದ ನೆಮ್ಮದಿ. ನಾಟಕಕಾರನಾದ ನಾನು ನಾಟಕದ ರಚನೆ, ನಿರ್ದೇಶನ, ನಟನೆಯಿಂದ ಒಂದೂವರೆ ವರ್ಷಗಳ ಕಾಲ ಈ ಕಾದಂಬರಿಗಾಗಿ ದೂರವಾದೆ. ಪ್ರಸ್ತುತ ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ ಎಂದು ಒಬ್ಬರು ಹಲುಬಿದ್ದನ್ನು ಕಂಡು ಕಾದಂಬರಿಯಲ್ಲಿ ತೊಡಗಲು ಮನಸಾಯಿತು. ಅದು ದುಸ್ಸಾಹಸವೋ, ಕಾಲಹರಣವೋ ಓದುಗರು ತಿಳಿ ಹೇಳಿ. ತಂದೆಯ ಸಾವಿನ ನಂತರದಲ್ಲಿ ಪ್ರಸ್ತುತ ನಗರ ಸಮಾಜದ ವ್ಯಕ್ತಿ ಹದಿನೈದು ದಿನಗಳ ಸಮಯದಲ್ಲಿ ಹಲವಾರು ಹೊಳಹುಗಳನ್ನು ಕಂಡು ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕುತ್ತಾನೆ. ಹೊಳಹುಗಳಿಂದ ಪ್ರಾರಂಭವಾಗಿ ಕೊನೆಯವರೆಗೆ ಆತನ್ನಲ್ಲಿ ಆಗುವ ಸ್ಥಿತ್ಯಾಂತರದ ಯಾನವೇ ಕರ್ಮ.
ಕರ್ಮದ ಬರವಣಿಗೆಯ ಆರಂಭದಲ್ಲಿ ನನ್ನಲ್ಲಿದ್ದ ಹಲವಾರು ತಾತ್ವಿಕ ಗೊಂದಲಕ್ಕೆ ಎಸ್ ಎಲ್ ಭೈರಪ್ಪನವರು ಸೂಕ್ತ ವಿಚಾರಗಳೊಂದಿಗೆ ನೆಲೆಗಟ್ಟನ್ನು ಒದಗಿಸಿದರು, ನಾಗರಾಜ ಶ್ರೌತಿಗಳು ಹದಿನೈದು ದಿನಗಳವರೆಗಿನ ಕಾರ್ಯದ ಪೂರ್ಣ ಪಾಠ ಹೆಳೀಕೂಟ್ಟರು.ಶತಾವಧಾನಿ ಅರ್ ಗಣೇಶರು ಕಾದಂಬರಿಯಲ್ಲಿನ ಸಂಸ್ಕ್ರ್ತತ ಭಾಗಗಳನ್ನು ತಿದ್ದಿಕೊಟ್ಟರು. ಇವರೆಲ್ಲರಿಗೂ ನನ್ನ ಸಾಷ್ಟಾಂಗ ಧನ್ಯವಾದ.
ಲೇಖನ ಬರೆದವರು » ನಾಗೇಶ್ at 12:10 pm
Subscribe to:
Posts (Atom)